ನೆಹರು ಮೆಮೋರಿಯಲ್ ಕಾಲೇಜು ಸುಳ್ಯ – ಜಲಶಕ್ತಿ ಅಭಿಯಾನ ಕಾರ್ಯಕ್ರಮ
ನೆಹರು ಮೆಮೋರಿಯಲ್ ಕಾಲೇಜು ಸುಳ್ಯ, ಆಂತರಿಕ ಗುಣಮಟ್ಟ ಖಾತರಿಕೋಶ, ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ “ಜಲಶಕ್ತಿ ಅಭಿಯಾನ” ವಿಶೇಷ ಮಾಹಿತಿ ಕಾರ್ಯಕ್ರಮವು ದಿನಾಂಕ 04.03.2022ರಂದು ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದ ಉದ್ಘಾಟನೆಯನ್ನು ಶ್ರೀ ವಿನಯ್ ಕುಮಾರ್ ಕಂದಡ್ಕ, ಅಧ್ಯಕ್ಷರು, ಪಟ್ಟಣ ಪಂಚಾಯತ್ ಸುಳ್ಯ ಇವರು ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ.ಎಂ ಇವರು ವಹಿಸಿದ್ದರು. ಶ್ರೀಯುತ ತುಕರಾಮ್ ಗೌಡ ಜಿ, ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಮಂಗಳೂರು ಇವರು ಜಲಶಕ್ತಿ ಅಭಿಯಾನದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಯುತ ಸುರೇಶ್ ಬಾಳಿಲ ಐಇಸಿ ಜಲಜೀವನ್ ಮಿಷನ್ ಇವರು ವಿದ್ಯಾರ್ಥಿಗಳಿಗೆ ವಿಶೇಷ ಮಾಹಿತಿಯನ್ನು ನೀಡಿದರು. ಶ್ರೀಮತಿ ರತ್ನಾವತಿ ಡಿ. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶ್ರೀಮತಿ ಮಮತಾ ಕೆ. ಸಂಯೋಜಕಿ ಆಂತರಿಕ ಗುಣಮಟ್ಟ ಖಾತರಿಕೋಶ ಇವರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ಅನಂತಲಕ್ಷ್ಮಿ ಮುಖ್ಯಸ್ಥರು, ವ್ಯವಹಾರ ನಿರ್ವಹಣಾ ವಿಭಾಗ ವಂದನಾರ್ಪಣೆ ಸಲ್ಲಿಸಿದರು. ಜಲಶಕ್ತಿ ಅಭಿಯಾನದ ಕುರಿತು ಹಮ್ಮಿಕೊಂಡ ವಿಶೇಷ ಸ್ಪರ್ಧೆಗಳನ್ನು ಡಾ. ವಿಜಯಲಕ್ಷ್ಮಿ ಎನ್.ಎಸ್ ಮುಖ್ಯಸ್ಥರು ಅರ್ಥಶಾಸ್ತ್ರ ವಿಭಾಗ, ಶ್ರೀ ಶ್ರೀಧರ್ ವಿ, ವಾಣಿಜ್ಯ ಶಾಸ್ತ್ರ ವಿಭಾಗ, ಶ್ರೀಮತಿ ಭವ್ಯ ಪಿ.ಎಂ, ಮುಖ್ಯಸ್ಥರು, ಇಂಗ್ಲಿಷ್ ವಿಭಾಗ ನೆರವೇರಿಸಿದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆಯನ್ನು ಮುಖ್ಯ ಅತಿಥಿಗಳು ನೆರವೇರಿಸಿಕೊಟ್ಟರು. ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.