Previous slide
Next slide

ಅಭಿನಂದನೆಗಳು

ಚಟುವಟಿಕೆಗಳು

ಸುಳ್ಯ ತಾಲೂಕು ೨೫ನೇ ಕನ್ನಡ ಸಾಹಿತ್ಯ ಸಮ್ಮೇಳನ 2021

IMG-20200816-WA0009

2020 ರ ಸ್ವಾತಂತ್ರ್ಯ ದಿನಾಚರಣೆಯನ್ನು ಕಾಲೇಜು ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಆಚರಿಸಿದರು.

ಕಾಲೇಜು ವಾರ್ಷಿಕ ದಿನಾಚರಣೆ 2020

2020 ಕಾಲೇಜು ವಾರ್ಷಿಕ ದಿನಾಚರಣೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಆಡಳಿತ ಮಂಡಳಿ

ಪ್ರಾಂಶುಪಾಲರ ನುಡಿ

Prof. RudraKumar M M., M.Com.,M.Phil.,NET.,Ph.D.

Contact: +91-7353756487(M)

+91-8257-233331(Principal’s Office)

ನೆಹರು ಮೆಮೋರಿಯಲ್ ಮಹಾವಿದ್ಯಾಲಯದ ಕಾರ್ಯಾಸ್ಥಾನದ ಜಾಲತಾಣಕ್ಕೆ ತಮಗೆಲ್ಲರಿಗೂ ಸುಸ್ವಾಗತ. ಮಹನೀಯರೇ, ತಾವುಗಳು ನೆಹರು ಮೆಮೋರಿಯಲ್ ವಿದ್ಯಾಸಂಸ್ಥೆಯ ಜಾಲತಾಣವನ್ನು ಶೋಧಿಸುವಿರಾದರೆ ಕಾಲೇಜಿನ ವಿಹಂಗಮ ನೋಟ ಮತ್ತು ಕಾರ್ಯಚಟುವಟಿಕೆಗಳ ವಿಸ್ತೃತ ದರ್ಶನ ನಿಮಗಾಗುತ್ತದೆ.

ಇಂದು ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ) ಇದರ ಆಶ್ರಯದಲ್ಲಿ ೧೯೭೬ ರಲ್ಲಿ ಪ್ರಪ್ರಥಮವಾಗಿ ಆರಂಭಗೊಂಡ ಮಾತೃ ಸಂಸ್ಥೆ ನೆಹರು ಮೆಮೋರಿಯಲ್ ಕಾಲೇಜು ಆಗಿದೆ.

ಗ್ರಾಮೀಣ ಪ್ರದೇಶದ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯಗಳ ಯುವಜನತೆಗೆ ಉನ್ನತ ಶಿಕ್ಷಣವನ್ನೊದಗಿಸುವ ಸದುದ್ದೇಶದಿಂದ ಆರಂಭಗೊಂಡ ಈ ವಿದ್ಯಾಸಂಸ್ಥೆ ಕಳೆದ ೪೪ ವರ್ಷಗಳಿಂದ ಸ್ಥಳೀಯ,ಕರ್ನಾಟಕದ ಕೊಡಗು,ಹಾಸನ ಮತ್ತು ಮೈಸೂರು, ಕೇರಳದ ಕಾಸರಗೋಡು ಮೊದಲಾದ ಭಾಗಗಳಿಂದ ವಿದ್ಯಾರ್ಜನೆಗಾಗಿ ಬರುವ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯತೆಗಳನ್ನು ನಿರಂತರವಾಗಿ ಪೂರೈಸುತ್ತಾ ಬರುತ್ತಿದೆ.

ಪಠ್ಯಕ್ಕೆ ಪೂರಕವಾದ ಪುಸ್ತಕಗಳ ಮತ್ತು ಪರಮಾರ್ಶನ ಮಹತ್ವವುಳ್ಳ ಅತ್ಯುತ್ತಮ ಗ್ರಂಥಗಳ ಸಂಗ್ರಹವಿರುವ ಗ್ರಂಥಾಲಯ,ಬೋಧನೆಗೆ ಪೂರಕವಾದ ಆಧುನಿಕ ತಂತ್ರಜ್ಞಾನದಿಂದ ಕೂಡಿರುವ ಲ್ಯಾಬೋರೇಟರಿಗಳು,ಅರ್ಹ ಮತ್ತು ಅನುಭವಿ ಕಾರ್ಯಕ್ಷಮತೆಯಿರುವ ಅದ್ಯಾಪಕರ ಬಳಗ,ಸಾಂಸ್ಕೃತಿಕ,ಸಾಹಿತ್ಯ ಮುಂತಾದ ಚಟುವಟಿಕೆಗಳಿಗೆ ಉತ್ತೇಜಕವಾಗುವ ಸಂಘಗಳು, ಹಲವು ಸಮಿತಿಗಳು ಪಠ್ಯೇತರ ಚಟುವಟಿಕೆಗಳನ್ನು ನಡೆಸುವುದರ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಪ್ರಯತ್ನಿಸುತ್ತಿವೆ, ಒಟ್ಟಾರೆಯಾಗಿ ವಿದ್ಯಾಸಂಸ್ಥೆ ಕಲಿಕಾ ಕೇಂದ್ರಿತವಾಗಿ ರೂಪುಗೊಂಡಿದೆ.

ಉದ್ಯೋಗ ಮತ್ತು ತರಬೇತಿ, ಹಾಗು ವಿವಿಧ ಕೌಶಲಗಳ ತರಬೇತಿಯನ್ನು ಕಾಲೇಜಿನ ಆಂತರಿಕ ಗುಣಮಟ್ಟ ಕೋಶದ ಮೂಲಕ ನೀಡಲಾಗುತ್ತಿದೆ. ಹಾಗೆಯೇ ಉದ್ಯೋಗಕ್ಕಾಗಿರುವ ಆಯ್ಕೆ ಪ್ರಕ್ರೀಯೆಗೂ ಕಾಲೇಜಿನಲ್ಲಿ ಒತ್ತು ನೀಡಲಾಗುತ್ತಿದೆ. ಕಾಲೇಜಿನ ಉದ್ದೇಶಕ್ಕೆ ಪೂರಕವಾಗಿ,ಸಂಶೋಧನಾ ಚಟುವಟಿಕೆಗೆ ಒತ್ತು ನೀಡಲಾಗುತ್ತದೆ. ಸಂಸ್ಥೆಯ ಹಲವು ಅಧ್ಯಾಪಕರ ಸಂಶೋಧನಾ ಕೃತಿಗಳು ಮತ್ತು ಸಾಹಿತ್ಯ ಕೃತಿಗಳು ಪ್ರಕಟವಾಗಿವೆ. ಈ ಮೂಲಕ ವಿದ್ಯಾರ್ಥಿಗಳಲ್ಲಿಯೂ ಸಂಶೋಧನಾ ಮತ್ತು ಸಾಹಿತ್ಯಕ ಪ್ರವೃತ್ತಿ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ. ಕಳೆದ ಹಲವು ಶೈಕ್ಷಣಿಕ ವರ್ಷಗಳಲ್ಲಿ ವಿದ್ಯಾರ್ಥಿಗಳು ರೄಾಂಕ್ ಪಡೆದು ಸಾಧನೆ ಮಾಡಿದ ಮತ್ತು ಉತ್ತಮ ಫಲಿತಾಂಶ ಪಡೆದ ದಾಖಲೆಗಳು ಕಾಲೇಜಿನದ್ದಾಗಿದೆ. ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗಗಳಲ್ಲೂ ವಿದ್ಯಾರ್ಥಿಗಳ ಸಾಧನೆ ಗಮನಾರ್ಹವಾಗಿದೆ. ಕಾಲೇಜಿನ ಆಡಳಿತ ಮಂಡಳಿ,ಅಧ್ಯಾಪಕ ಸಮೂಹ,ಸಿಬ್ಬಂದಿ ವರ್ಗ,ವಿದ್ಯಾರ್ಥಿಗಳು,ರಕ್ಷಕ-ಶಿಕ್ಷಕ ಮತ್ತು ಹಳೆ ವಿದ್ಯಾರ್ಥಿ ಸಂಘಗಳ ಸಹಭಾಗಿತ್ವದಲ್ಲಿ ಕಾಲೇಜು ತನ್ನ ಸಾಧನೆಯನ್ನು ಮಾಡಲು ಸಾಧ್ಯವಾಗಿದೆ. ನಮ್ಮಲ್ಲಿ ವಿದ್ಯಾರ್ಜನೆ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ಖಾಸಗಿ-ಸರ್ಕಾರಿ ವಲಯದಲ್ಲಿ ಉದ್ಯೋಗಿಗಳಾಗಿದ್ದಾರೆ. ಅತ್ಯುತ್ತಮ ಕಾನೂನು ತಜ್ಞರಾಗಿದ್ದಾರೆ; ರಾಜಕಾರಣಿಗಳಾಗಿದ್ದಾರೆ; ವಿದೇಶಗಳಲ್ಲಿ ಉದ್ಯೋಗಿಗಳಾಗಿ ಆರ್ಥಿಕ ಸ್ವಾವಲಂಬಿಗಳಾಗಿ,ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆದು ಗೌರವಕ್ಕೆ ಪಾತ್ರರಾಗಿದ್ದಾರೆ. ಇವರೆಲ್ಲರೂ ಈ ಹೊತ್ತಿನಲ್ಲೂ ಕಾಲೇಜಿನೊಂದಿಗೆ ನಿಕಟ ಸಂಬಂಧವನ್ನು ಹೊಂದಿದವರಾಗಿ ಕಾಲೇಜಿನ ಅಭಿವೃದ್ದಿಗೆ ತಮ್ಮ ಕೊಡುಗೆಗಳನ್ನು ನೀಡುತ್ತಿದ್ದಾರೆ. ‘ಹನಿಗೂಡಿ ಹಳ್ಳ’ ಎನ್ನುವಂತೆ ಎಲ್ಲರ ಕೈಸೇರುವಿಕೆಯಿಂದ ಕಾಲೇಜು ತನ್ನ ಧ್ಯೇಯೋದ್ದೇಶವನ್ನು ತಲುಪಲು ಸಾಧ್ಯ ಎನ್ನುವ ಎಚ್ಚರ ನಮ್ಮದಾಗಿದೆ. ಸಂಸ್ಥೆಯ ಮುಂದಿನ ಯಶಸ್ಸಿಗೆ ಎಲ್ಲರ ಸಹಕಾರವನ್ನು ಕೋರುತ್ತೇನೆ.

ನಮ್ಮ ಸಹ ಸಂಸ್ಥೆಗಳು